: ಸಖ್ಯಮೇಧ: ಅವಳೆಂದರೆ...

May 06, 2015

ಅವಳೆಂದರೆ...

ಮಳೆಬರುವ ಮೊದಲಕ್ಷಣ
ಆಗಸವ ತುಂಬಿರುವ
ಮೇಘಗಳ ಗಾಂಭೀರ್ಯ
ಅವಳ ನಡೆಯಲ್ಲಿ...

. ಮಂಜಿನಲೂ ತಾನರಳಿ
. ಅಂಜದೆಯೇ ಘಮ ಬೀರಿ
. ಮುದ ನೀಡುವಾ ಸುಮವು
. ಅವಳ ಕಣ್ಣಂತೆ...

ಬಾನೆತ್ತರಕೆ ಬೆಳೆದು
ತಂಪು ನೆರಳನ್ನೀಯ್ವ
ಹೊಂಗೆ ವೃಕ್ಷದ ತರಹ
ಭರವಸೆಯ ಕಣ್ಣು...

. ಫಲಭರಿತ ಹೊಸದೊಂದು
. ಮರವೊಂದ ಕಂಡಾಗ
. ಹಕ್ಕಿಗಳು ನಕ್ಕಂತೆ
. ಬಳೆಯ ಸದ್ದು...

ಹಸಿರು ಗದ್ದೆಯ ನಡುವೆ
ಬೀಸುಗಾಳಿಯು ಹಾದು
ತೆನೆ ಬಳುಕಿ ನಕ್ಕಂತೆ
ಅವಳ ಮುಂಗುರುಳು...

. ಅತ್ತಿತ್ತ ಓಡಾಡಿ
. ಪೆದ್ದಾಗಿ ಕುಣಿಯುತಿಹ
. ಎಳೆಗರುವಿನಂತಹುದೇ
. ಮುಗ್ಧ ಮನಸು...

‪‎ಕೆಂಡಸಂಪಿಗೆ‬
. . . . . . ಸಖ್ಯಮೇಧ

No comments :

Post a Comment