: ಸಖ್ಯಮೇಧ: ಪ್ರೀತಿ

January 08, 2015

ಪ್ರೀತಿ

ಅವನ ಕಂಗಳ ಶರಧಿಯಲ್ಲಿ
ಅವಳು ಮುಳುಗೇಳುತ್ತಾಳೆ...
ಅವಳ ಕಂಗಳ ಶರಧಿಯ ವಿಸ್ತಾರ ಕಂಡು
ಅವನು ಬೆರಗಾಗುತ್ತಾನೆ...
ಅವನು 'ಅವಳೇ ಕಾವ್ಯ ' ಎನ್ನುತ್ತಾನೆ...
ಅವಳು 'ಅವನುಸಿರಿನಲಿ ಕಾವ್ಯ ಹುಟ್ಟಿತು' ಎನ್ನುತ್ತಾಳೆ...
ಅವನ ಬಾಳಿಗೆ ಅವಳ ಕಂಗಳ ಕಾಂತಿ
ದಾರಿ ತೋರಿಸಿದುವಂತೆ...
ಅವಳಿಗೆ ಅವನೇ ಬಾಳ ದಾರಿಯಂತೆ...
ಯಾರ ಪ್ರೀತಿ ದೊಡ್ಡದೋ...?!
. . . . . ಸಖ್ಯಮೇಧ

No comments :

Post a Comment